ಸ್ಥಾಪನೆ ಉದ್ದೇಶ

ಈ ಸಂಸ್ಥೆಯು ಎಜುಕೇಟ್, ಎನ್ಲೈಟನ್, ಎಂಪವರ್ ಎಂಬ ಧೇಯ್ಯವಾಕ್ಯನ್ನೊಳಗೊಂಡಿದ್ದು, ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆಗೆ ಶ್ರಮಿಸುತ್ತಿದೆ. ಲಾಭಕ್ಕೋಸ್ಕರ ಸಂಸ್ಥೆಯನ್ನು ನಡೆಸದೆ ಸಮಾಜಕ್ಕಾಗಿ ವಸ್ತುನಿಷ್ಠ ಹಾಗೂ ನೈಜ ಸುದ್ದಿಯನ್ನು ಜನ ಸಾಮಾನ್ಯನಿಗೆ ತಲುಪಿಸುವ ಉದ್ದೇಶದಿಂದ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿ ಕಾರ್ಯಚರಿಸುತ್ತಿದೆ.

ಬಹುಶ: ಅಂತರ್ಜಾಲ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಯು ಏಕಸ್ವಾಮ್ಯ ಉದ್ಯಮವಾಗದೆ, ಬಹುಜನ ಆಧಾರಿತ ಬಂಡವಾಳ ಹೂಡಿಕೆ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವುದು ವಿಶೇಷವೇ ಸರಿ. ಸ್ವ-ಇಚ್ಛೆಗೆ ಮನ್ನಣೆ ನೀಡದೆ ಸಂಘಟಿತ ಉದ್ಯಮವಾಗಿ ಬೆಳೆಯುತ್ತಿದ್ದು, ಜಯದತ್ತ ಸಾಗುವ ಗುರಿ ಹೊಂದಿದೆ.

ಇದುವರೆಗೆ ವಿಭಿನ್ನ ಮಾದರಿಯನ್ನು ಅಳವಡಿಸಿ, ನಮ್ಮ ಸಂಸ್ಥೆಯು ಪ್ರಗತಿಯನ್ನು ಸಾಧಿಸಿದ್ದು, ಇದರ ಶ್ರೇಯ ಎಲ್ಲ ಓದುಗರಿಗೆ ಮಾಧ್ಯಮ ಮಿತ್ರರಿಗೆ, ನೌಕರರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಸಲ್ಲುತ್ತದೆ.

ವ್ಯವಸ್ಥಾಪಕ ವರ್ಗದ ಮತ್ತು ಇನ್ನಿತರರ ಒತ್ತಡವಿಲ್ಲದೆ, ಪ್ರಗತಿಪರ ಚಿಂತನೆಯೊಂದಿಗೆ ನಿರ್ಭೀತರಾಗಿ ಪತ್ರಕರ್ತರು ಸುದ್ದಿಯನ್ನು ಪ್ರಕಟಿಸುವಲ್ಲಿ ಸ್ವತಂತ್ರರಾಗಿರುತ್ತಾರೆ. ಈ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು ಧನಾತ್ಮಕ ಬದಲಾವಣೆಗೆ ನೈತಿಕ ಮೈಗೂಡಿಸಿಕೊಂಡು ನಿರಂತರವಾಗಿ ತಮ್ಮನ್ನೇ ತೊಡಗಿಸಿಕೊಂಡಿರುತ್ತಾರೆ.