ಅವಲೋಕನ

ಎಂದೆಂದಿಗೂ ಸತ್ಯ ಎಂಬ ಧ್ಯೇಯದೊಂದಿಗೆ ಸ್ಪೀಯರ್ ಹೆಡ್ ಮೀಡಿಯಾ ಪ್ರೈ.ಲಿ. ಮತ್ತು ಸ್ಪೀಯರ್ ಹೆಡ್ ಗ್ರೂಪ್ 2013ರಲ್ಲಿ ಆರಂಭಿಸಿದ ಅಂತರ್ಜಾಲ ಸುದ್ದಿಮಾಧ್ಯಮಗಳಾದ ನ್ಯೂಸ್ ಕರ್ನಾಟಕ.ಕಾಮ್ ಮತ್ತು ನ್ಯೂಸ್ ಕನ್ನಡ.ಕಾಮ್ ಇಂದು ದೇಶ ವಿದೇಶಗಳ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕನ್ನಡಿಗರು ಸೇರಿದಂತೆ ಎಲ್ಲರ ನಂಬಿಕೆ, ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಇಷ್ಟೇ ಅಲ್ಲದೆ ಇದೀಗ ಕರ್ನಾಟಕ ಟುಡೇ ಎಂಬ ಏಕೈಕ ಆಂಗ್ಲ ಮಾಸಿಕ ಪತ್ರಿಕೆಯನ್ನು ಹೊರತಂದಿದ್ದು, ಅಲ್ಪ ಸಮಯದಲ್ಲೇ ಜನಮನ ಗೆಲ್ಲುವಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಇದಕ್ಕೆ ಪತ್ರಿಕೆಗೆ ಹರಿದು ಬರುತ್ತಿರುವ ಪ್ರಶಂಸೆಗಳೇ ಸಾಕ್ಷಿಯಾಗಿದೆ.

ಸ್ಪೀಯರ್ ಹೆಡ್ ಗ್ರೂಪ್ ಪ್ರೈಲಿ ಹೊರತಂದ ಈ ಮೂರು ಸುದ್ದಿ ಮಾಧ್ಯಮಗಳು ದಿನದಿಂದ ದಿನಕ್ಕೆ ಜನತೆಗೆ ತಾಜಾ ಸುದ್ದಿಯೊಂದಿಗೆ ಸತ್ಯಾನು ಸತ್ಯತೆ, ನಿಖರ ಮಾಹಿತಿಯನ್ನು ಒದಗಿಸುವ ಮೂಲಕ ಸುದ್ದಿಲೋಕದಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿದೆ.

ನಮ್ಮ ಸುದ್ದಿಮಾಧ್ಯಮವು ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳು, ದಕ್ಷಿಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ರಾಜ್ಯಗಳ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರೆ, ಕರ್ನಾಟಕ ಟುಡೇ ಮಾಸಿಕವು ಉತ್ತಮ ಲೇಖನ, ವಿಶೇಷ ಬರವಣಿಗೆ, ಆಹ್ಲಾದಕರ ಸುದ್ದಿಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದು, ಓದುಗರ ಅನುಕೂಲಕ್ಕಾಗಿ ಅಂತರ್ಜಾಲದಲ್ಲಿಯೂ ಕರ್ನಾಟಕ ಟುಡೇ.ಕಾಮ್ ಈ ಮಾಸಿಕ ಪ್ರತಿಕೆ ಲಭ್ಯವಿದೆ ಎಂದು ಹೇಳಲು ಖುಷಿಯಾಗುತ್ತಿದೆ.

ದಿನದಿಂದ ದಿನಕ್ಕೆ ವ್ಯಾಪ್ತಿ ಮೀರಿ ಬೆಳೆಯುತ್ತಿರುವ ಸಂಸ್ಥೆ ಕೆಲವೇ ವರ್ಷಗಳಲ್ಲಿ ಎಲ್ಲರ ಮನೆಮನ ತಲುಪುವಲ್ಲಿ, ಸುದ್ದಿ ಪ್ರಿಯರನ್ನು ತಲುಪುವಲ್ಲಿ ಮುಂಚೂಣಿಯಲ್ಲಿದೆ. ಇದರೊಂದಿಗೆ ಜಗತ್ತಿನಾದ್ಯಂತ ಉತ್ಪನ್ನಗಳ ಬ್ರ್ಯಾಂಡ್ ತಯಾರಕರಿಗೆ ಮಾತ್ರವಲ್ಲದೆ, ಗ್ರಾಹಕರಿಗೂ ಉತ್ಪನ್ನಗಳ ನಿಖರ ಮಾಹಿತಿ ತಿಳಿಸಿ, ಗ್ರಾಹಕರೂ ಮತ್ತು ಉತ್ಪಾದಕರ ನಡುವೆ ಉತ್ತಮ ಸಂಬಂಧ ಏರ್ಪಡುವಲ್ಲಿ ಸಹಕಾರಿಯಾಗಿದೆ.

ತನ್ನದೇ ಆದ ತತ್ವ ಸಿದ್ಧಾಂತಗಳನ್ನು ರೂಢಿಸಿಕೊಂಡಿರುವ ಸ್ಪೀಯರ್ ಹೆಡ್ ಮೀಡಿಯಾದ ಮೂಲಕ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ತತ್ವ:

ಸಮಗ್ರ ಹಾಗೂ ದಕ್ಷ ವರದಿಯನ್ನು ಉತ್ತಮ ಮಾಹಿತಿಯ ಮೂಲಕ ಭಿತ್ತರಿಸಲು “ಹೋದಡೆಯೆಲ್ಲೆಲ್ಲಾ ಹೆಚ್ಚು ಕಣ್ತೆರೆದು ವೀಕ್ಷಿಸಿದಷ್ಟು ಅಧಿಕ ಅರಿವು ಮೂಡುತ್ತದೆ ಎಂಬ ಉದ್ದೇಶದೊಂದಿಗೆ ಸ್ಪೀಯರ್ ಹೆಡ್ ಮೀಡಿಯಾ ಸಂಸ್ಥೆಯು ಜನರ ಪರಿಜ್ಞಾನ ವೃದ್ದಿಸಲು ಸಹಕಾರಿಯಾಗಿದೆ.

ಸಮಾಜದಲ್ಲಿನ ಜನಸಾಮಾನ್ಯನ ಧ್ವನಿ ಮತ್ತು ಆ ಧ್ವನಿಗೆ ಸರಿಯಾದ ನ್ಯಾಯ ಸಿಕ್ಕಿದಾಗ ಜನರ ಸಾಮಾರ್ಥ್ಯ ಹೆಚ್ಚಿ ಸಮಾಜದಲ್ಲಿ ಅವರು ಕೂಡ ಶಕ್ತಿವಂತರಾಗಲು ಸಾಧ್ಯ. ಜನಸಾಮಾನ್ಯರ ಧ್ವನಿ ಹಾಗೂ ಆ ಧ್ವನಿಗೆ ಸೂಕ್ತ ನ್ಯಾಯ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಲು ನಮ್ಮ ಸಂಸ್ಥೆ ಸ್ಪೀಯರ್ ಹೆಡ್ ಮೀಡಿಯಾ ಪ್ರೈ.ಲಿ ಮಾಧ್ಯಮಲೋಕದಲ್ಲಿ ತಲೆ ಎತ್ತಿ ನಿಂತಿದೆ. ಸಂಸ್ಥೆಯು ಕೆಲವರಿಗೆ ಮಾತ್ರ ಸೀಮಿತವಾಗಿರದೆ ಉನ್ನತ ಧ್ಯೇಯ್ಯೋದ್ಧೇಶಗಳನ್ನು ಹೊಂದಿ ಮಾಧ್ಯಮ ಕ್ಷೇತ್ರಕ್ಕೂ ತನ್ಮೂಲಕ ಜನಧ್ವನಿಯಾಗಲು ಇಚ್ಛಿಸುತ್ತದೆ. ಈ ಗುರಿಯನ್ನು ಸಾಧಿಸಲು ಬಂಡವಾಳ ಹೂಡಿಕೆದಾರರು, ಉದ್ಯೋಗಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.