ಸದಸ್ಯರು

Brian
ಬ್ರಾಯನ್ ಫೆರ್ನಾಂಡಿಸ್
ಸಮೂಹ ಸಂಸ್ಥೆಯ ಮುಖ್ಯಸ್ಥರು

ಇವರು ರೋಶನಿ ನಿಲಯದ ಹಳೆ ವಿದ್ಯಾರ್ಥಿಯಾಗಿದ್ದು, ಸಮಾಜಸೇವಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಮಾನವ ಸಂಪನ್ಮೂಲ ವಿಭಾಗದಲ್ಲಿ ಸ್ಥಳೀಯ, ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 26 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಸಂಸ್ಥೆಯ ಸದಸ್ಯರಲ್ಲಿ ನಾಯಕತ್ವ ಗುಣಗಳ ಜತೆಗೆ ಕೌಶಲ್ಯವನ್ನು ಹೆಚ್ಚಿಸಿ ಸಂಸ್ಥೆಯನ್ನು ಅಭಿವೃದ್ದಿಪಡಿಸುವಲ್ಲಿ ಮುಖ್ಯ ಪಾತ್ರದಾರರಾಗಿದ್ದು, ಇವರು ಪ್ರಮುಖವಾಗಿ ಮಾನವ ಸಂಪನ್ಮೂಲ, ಜೀವನ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಅಲ್ಲದೆ, ಅವರು ಪ್ರತಿಭಾವಂತ ಟೋಸ್ಟ್ ಮಾಸ್ಟರ್ ರಾಗಿದ್ದಾರೆ. ಇವರು ಉತ್ತಮ ಬರಹಗಾರರಾಗಿಯೂ, ಮಾತ್ರವಲ್ಲದೇ ಕವಿಗಳಾಗಿಯೂ ಅದ್ಭುತ ಕಾಲ್ಪನಿಕ ಲೇಖನಗಳು, ಕವನ ಸಂಕಲನಗಳನ್ನು ರಚಿಸುವುದರಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ. ಇವರ ಅನೇಕ ಲೇಖನಗಳು ಪ್ರತಿಷ್ಠಿತ ಮುದ್ರಣಗಳಲ್ಲಿ ಪ್ರಕಟಿತಗೊಂಡು ಪ್ರಶಂಸೆಗೆ ಪ್ರಾತವಾಗಿದ್ದು, ಇವರ ಲೇಖನಗಳನ್ನು blog http://brian-unplugged.blogspot.in/ ನಲ್ಲಿ ಓದಬಹುದಾಗಿದೆ. ಇವರು ಸಂಗೀತ ಪ್ರಿಯರಾಗಿದ್ದು, ಹಲವಾರು ಕಾರ್ಯಕ್ರಮದಲ್ಲಿ ಅದ್ಭುತವಾಗನಿರೂಪಣೆಯನ್ನು ನೀಡಿ ಜನಮೆಚ್ಚುಗೆ ಗಳಿಸಿದ್ದಾ

Brian
ಕ್ಯಾನ್ಯೂಟ್ ಜೆ ಪಿಂಟೊ
ಸಮೂಹ ಆಡಳಿತಾಧ್ಯಕ್ಷರು

ಮೆಕ್ಯಾನಿಕಲ್ ಡಿಪ್ಲೊಮಾ ಪದವಿ ಪಡೆದಿರುವ ಇವರು ಉದ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಸುಧೀರ್ಘ 12 ವರ್ಷಗಳ ಅನುಭವವನ್ನು ಪಡೆದಿರುತ್ತಾರೆ. ಅಲ್ಲದೇ, ಇವರೊಬ್ಬ ದಕ್ಷ ಸಂಘಟಕ ಹಾಗೂ ಸ್ಪೀಯರ್ ಗ್ರೂಪ್ ಸಂಸ್ಥೆಯ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸಿ ಯಶಸ್ವಿಗೆ ಕಾರಣರಾಗಿದ್ದಾರೆ. ಪ್ರಸ್ತುತ ಸ್ಪೀಯರ್ ಹೆಡ್ ಮೀಡಿಯಾದ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ್ತಿಗೇರಲು ಶ್ರಮಿಸುತ್ತಿರುವುದು ಶ್ಲಾಘನೀಯ.ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಇವರು, ಮಾರ್ಕೆಟಿಂಗ್ ಕೌಶಲ್ಯ, ಕಾರ್ಯಕ್ರಮ ನಿರ್ವಹಣೆ ಹಾಗೂ ಇನ್ನಿತ್ತರ ಹಲವಾರು ವಿಭಾಗಗಳಲ್ಲಿ ಅನುಭವವನ್ನು ಪಡೆದು ಬಹುರ್ಮುಖಿ ಪ್ರತಿಭಾವಂತರಲ್ಲಿ ಒಬ್ಬರಾಗಿದ್ದಾರೆ.

Brian
ಮೆವಿಶ್ ಹುಸೇನ್
ಮಾರ್ಕೆಟಿಂಗ್ ಮುಖ್ಯಸ್ಥರು

ಇವರು ಜಸ್ಟೀಸ್ ಕೆ ಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಟ್ಟೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಮಾರಾಟ, ಮಾರಾಟ ಸಮನ್ವಯ, ವ್ಯಾಪಾರ ಅಭಿವೃದ್ಧಿ, ಮಾರ್ಕೆಟಿಂಗ್, ಮಾರ್ಕೆಟಿಂಗ್ ಇನ್ನೋವೇಷನ್ಸ್, ಸ್ಟ್ರಾಟಜಿ ಕ್ಷೇತ್ರದಲ್ಲಿ 9 ವರ್ಷಗಳ ಅನುಭವವನ್ನು ಪಡೆದಿರುತ್ತಾರೆ. ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾರುಕಟ್ಟೆ ಸಂಶೋಧನೆ ಸಂಸ್ಥೆಯ ಅಭಿವೃದ್ದಿ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.ಇಷ್ಟೇ ಅಲ್ಲದೇ ಹಲವಾರು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇಂಟೀರಿಯರ್ಸ್ ಮತ್ತು ಆರ್ಕಿಟೆಕ್ಚರ್, ಉದ್ಯಮ ಕ್ಷೇತ್ರದಲ್ಲಿ ಬಲವಾದ ನೆಟ್ವರ್ಕ್ ವನ್ನು ಹೊಂದಿದ್ದಾರೆ. ಮಾರ್ಕೆಂಟಿಂಗ್ ವಿಭಾಗದಲ್ಲಿ ಇವರ ಸಾಧನೆ ಅಪಾರವಾದದ್ದು. ಜೊತೆಗೆ ಕ್ರೀಡೆ, ಸಂಗೀತ, ನೃತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಬ್ಯಾಡ್ಮಿಂಟನ್ ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಹೊರಚಿಮ್ಮಿದ್ದಾರೆ.

Brian
ಭಕ್ತಿ ಹೆಗಡೆ
ಸಂಪಾದಕರು (ನ್ಯೂಸ್ ಕರ್ನಾಟಕ.ಕಾಮ್ ಹಾಗೂ ನ್ಯೂಸ್ ಕನ್ನಡ.ಕಾಮ್)

ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿಯನ್ನು ಪಡೆದಿರುವ ಇವರು , ಇಳಿ ವಯಸ್ಸಿನಲ್ಲೇ ಒಬ್ಬ ಶ್ರೇಷ್ಠ ಪತ್ರಕರ್ತೆಯಾಗಿ ಹೊರಹೊಮ್ಮಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಇವರ ಸಾಧನೆ ಅಪಾರ. 2004ರಲ್ಲಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗೆ ಮಂಗಳೂರಿನ ವರದಿಗಾರರಾಗಿ ತನ್ನ ವೃತ್ತಿ ಕಾರ್ಯಕ್ಕೆ ಪಾದಾಪರ್ಣೆಗೈದರು. 2011ರಲ್ಲಿ ಡೆಕ್ಕನ್ ಹೆರಾಲ್ಡ್ ನ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ಪ್ರಸಿದ್ದ ಜನಪ್ರಿಯ ಸುದ್ದಿಜಾಲವಾದ ಉದಯವಾಣಿ.ಕಾಮ್ ನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ನ್ಯೂಸ್ ಕರ್ನಾಟಕ.ಕಾಮ್ ನಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಗ್ರಾಮೀಣ ವರದಿಗಾರಿಕೆಯಿಂದ ಗ್ರಾಮಾಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನದಟ್ಟುಪಡಿಸುವಲ್ಲಿ ಯಶಸ್ವಿಯಾಗಿದ್ದು ಹೆಮ್ಮೆಯ ವಿಚಾರ.

Brian
ಪ್ರವೀಣ್ ನಾಯಕ್
ಡಿಸೈನ್-ವರ್ಡಿವೈಸ್ ಮುಖ್ಯಸ್ಥರು

ತನ್ನ ಕೆಲಸ ಕಾರ್ಯದಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠತೆಯನ್ನು ಹೊಂದಿರುವ ಇವರು ತನ್ನ ವೃತ್ತಿಯಲ್ಲಿ ಭಾರತ ಹಾಗೂ ಹೊರದೇಶಗಳಲ್ಲಿ 27 ವರ್ಷಗಳ ಹೆಚ್ಚಿನ ಅನುಭವವನ್ನು ಪಡೆದಿದ್ದಾರೆ. ವಿನ್ಯಾಸದಲ್ಲಿ ಪ್ರ್ರಾವೀಣ್ಯತೆಯನ್ನು ಪಡೆದಿದ್ದು, ವಿನ್ಯಾಸಕ್ಕೆ ಸಂಬಂಧಪಟ್ಟಂತೆ ಯಾವುದೇ ವಿಷಯವನ್ನು ನೀಡಿದರೂ ಅದನ್ನು ತನ್ನದೇ ಆದ ಶೈಲಿಯಲ್ಲಿ ಸೃಜನಾತ್ಮಕವಾಗಿ ರಚಿಸುವಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ. ಇವರ ಗ್ರಾಫಿಕ್ ಡಿಸೈನ್ನ ಕೈಚಳಕ ಹಾಗೂ ಕ್ರಿಯೇಟಿವ್ ಮೈಂಡ್ ಅದ್ಭುತವಾದದ್ದು, ಸೃಜನಶೀಲತೆಯನ್ನು ಹೊಂದಿರುವ ಇವರು ಯಾವಾಗಲೂ ತೆರೆಯ ಹಿಂದೆ ಇರಲು ಇಚ್ಛಿಸುವ ವ್ಯಕ್ತಿತ್ವದವರಾಗಿದ್ದಾರೆ.