ತತ್ವ

ಸಮಗ್ರ ಹಾಗೂ ದಕ್ಷ ವರದಿಯನ್ನು ಉತ್ತಮ ಮಾಹಿತಿಯ ಮೂಲಕ ಭಿತ್ತರಿಸಲು “ಹೋದಡೆಯೆಲ್ಲೆಲ್ಲಾ ಹೆಚ್ಚು ಕಣ್ತೆರೆದು ವೀಕ್ಷಿಸಿದಷ್ಟು ಅಧಿಕ ಅರಿವು ಮೂಡುತ್ತದೆ ಎಂಬ ಉದ್ದೇಶದೊಂದಿಗೆ ಸ್ಪೀಯರ್ ಹೆಡ್ ಮೀಡಿಯಾ ಸಂಸ್ಥೆಯು ಜನರ ಪರಿಜ್ಞಾನ ವೃದ್ದಿಸಲು ಸಹಕಾರಿಯಾಗಿದೆ.

ಸಮಾಜದಲ್ಲಿನ ಜನಸಾಮಾನ್ಯನ ಧ್ವನಿ ಮತ್ತು ಆ ಧ್ವನಿಗೆ ಸರಿಯಾದ ನ್ಯಾಯ ಸಿಕ್ಕಿದಾಗ ಜನರ ಸಾಮಾರ್ಥ್ಯ ಹೆಚ್ಚಿ ಸಮಾಜದಲ್ಲಿ ಅವರು ಕೂಡ ಶಕ್ತಿವಂತರಾಗಲು ಸಾಧ್ಯ. ಜನಸಾಮಾನ್ಯರ ಧ್ವನಿ ಹಾಗೂ ಆ ಧ್ವನಿಗೆ ಸೂಕ್ತ ನ್ಯಾಯ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಲು ನಮ್ಮ ಸಂಸ್ಥೆ ಸ್ಪೀಯರ್ ಮೀಡಿಯಾ ಪ್ರೈ.ಲಿ ಮಾಧ್ಯಮಲೋಕದಲ್ಲಿ ತಲೆ ಎತ್ತಿ ನಿಂತಿದೆ. ಸಂಸ್ಥೆಯು ಕೆಲವರಿಗೆ ಮಾತ್ರ ಸೀಮಿತವಾಗಿರದೆ ಉನ್ನತ ಧ್ಯೇಯ್ಯೋದ್ಧೇಶಗಳನ್ನು ಹೊಂದಿ ಮಾಧ್ಯಮ ಕ್ಷೇತ್ರಕ್ಕೂ ತನ್ಮೂಲಕ ಜನಧ್ವನಿಯಾಗಲು ಇಚ್ಛಿಸುತ್ತದೆ. ಈ ಗುರಿಯನ್ನು ಸಾಧಿಸಲು ಬಂಡವಾಳ ಹೂಡಿಕೆದಾರರು, ಉದ್ಯೋಗಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.