ಪತ್ರಿಕೋದ್ಯಮದಲ್ಲಿ ಹಾಗೂ ಸುದ್ದಿಮಾಧ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಉದ್ದೇಶದಿಂದ ಜನತೆಗೆ ನೈಜ ಮತ್ತು ನಿಖರ ಸುದ್ದಿಯನ್ನು ನೀಡುವ ಉಲ್ಲಾಸ, ಉತ್ಸಾಹ ತುಂಬಿರುವ ಬಹುತೇಕ ಯುವ ಪೀಳಿಗೆಯನ್ನು ಹೊಂದಿರುವ ಈ ಸಂಸ್ಥೆಯ ಪ್ರಮುಖ ಶಾಖೆ ಮಂಗಳೂರಿನಲ್ಲಿದ್ದು, ಮಾತ್ರವಲ್ಲದೇ ಕರ್ನಾಟಕದ ಇತರ ಭಾಗಗಳಾದ ಬೆಂಗಳೂರು, ಮೈಸೂರು ಸೇರಿದಂತೆ ದುಬೈ, ಯುಎಇನಲ್ಲಿಯೂ ಕೂಡ ಈ ಸಂಸ್ಥೆಯ ಶಾಖೆಗಳಿವೆ.

ಈ ಸಂಸ್ಥೆಯು ಎಜುಕೇಟ್, ಎನ್ಲೈಟನ್, ಎಂಪವರ್ ಎಂಬ ಧೇಯ್ಯವಾಕ್ಯನ್ನೊಳಗೊಂಡಿದ್ದು, ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆಗೆ ಶ್ರಮಿಸುತ್ತಿದೆ.

ಸ್ಪೀಯರ್ ಹೆಡ್ ಮೀಡಿಯಾವು ಆಂಗ್ಲ ಓದುಗರಿಗೆ ಸುದ್ದಿಯನ್ನು ತಲುಪಿಸಲು ನ್ಯೂಸ್ ಕರ್ನಾಟಕ.ಕಾಮ್, ಕನ್ನಡ ಓದುಗರಿಗೆ ನ್ಯೂಸ್ ಕನ್ನಡ.ಕಾಮ್ ಮೂಲಕ ವಸ್ತುನಿಷ್ಠ ಸುದ್ದಿಯನ್ನು ಒದಗಿಸುತ್ತಿದ್ದು, ಆ ಮೂಲಕ ತನ್ನ ಧ್ಯೇಯ ವಾಕ್ಯವಾದ ಎಜುಕೇಟ್, ಎನ್ಲೈಟನ್, ಎಂಪವರ್ ಹಾಗೂ ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆಗೆ ಶ್ರಮಿಸುತ್ತಿದ್ದು, ಈ ಸುದ್ದಿಗಳನ್ನು ಆ್ಯಪ್ ಮೂಲಕ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ಗಳಲ್ಲಿಯೂ ಜನರಿಗೆ ಓದಲು ಅನುಕೂಲವಾಗುವಂತೆ ಸುದ್ದಿಗಳನ್ನು ನೀಡುತ್ತಿದೆ.

ಸ್ಪೀಯರ್ ಹೆಡ್ ಪ್ರೈ.ಲಿ. ಜವಾಬ್ದಾರಿಯುತ ಸುದ್ದಿಮಾಧ್ಯಮವಾಗಿ ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಉನ್ನತ್ತಿಗೆ ಕಾರಣವಾಗಿದ್ದು, ಮಾತ್ರವಲ್ಲದೇ ಸಂಸ್ಥೆಯ ಸದಸ್ಯರು, ಪಾಲುದಾರರು ಹಾಗೂ ಮುಖ್ಯಸ್ಥರ ನಡುವೆ ಉತ್ತಮ ಸಂಬಂಧಗಳನ್ನು ಹೊಂದಿದೆ.

ಸಂಸ್ಥೆಯ ಉದ್ಯೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುವುದು ಮಾತ್ರವಲ್ಲದೇ, ಅವರ ವೈಯಕ್ತಿಕ ಅಭಿವೃದ್ದಿಗೂ ಸಹಕಾರಿಯಾಗಿದೆ. ಜತೆಗೆ ಜವಬ್ದಾರಿಯುತ ಸುದ್ದಿ ಮಾಧ್ಯಮವಾಗಿ ಸುದ್ದಿ ಸಮಾಚಾರದ ಜತೆಗೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಉತ್ತಮ ಪರಿಸರ ಕಾಳಜಿಯನ್ನು ಹೊಂದಿದೆ.

ನೋಟ :ಜಗತ್ತಿನಾದ್ಯಂತ ಉತ್ಪನ್ನಗಳ ಬ್ರ್ಯಾಂಡ್ ತಯಾರಕರಿಗೆ ಮಾತ್ರವಲ್ಲದೆ, ಗ್ರಾಹಕರಿಗೆ ಉತ್ಪನ್ನಗಳ ನಿಖರ ಮಾಹಿತಿ ತಿಳಿದುಕೊಂಡು, ಆರೋಗ್ಯಕರ ವ್ಯಾಪಾರ ನಡೆಸಲು ಈ ಸುದ್ದಿ ಮಾಧ್ಯಮವು ಓದುಗರ ನೆಚ್ಚಿನ ಆಯ್ಕೆಯಾಗಿದೆ.

ಮಿಶನ್:

ಮೌಲ್ಯಗಳು: ಸಾಮರ್ಥ್ಯ - ಧನಾತ್ಮಕ ಚಿಂತನೆ
ಶ್ರೇಷ್ಠ್ಟತೆ – ಅತ್ಯುತ್ತಮದರಲ್ಲಿ ಅತ್ಯುತ್ತಮ
ತಂಡದ ಕೆಲಸ – ದಿಕ್ಸೂಚಿಯುಳ್ಳ ಸಹಭಾಗಿತ್ವ